Tuesday, October 13, 2009

ಮಳೆ ಮುನಿದ ಊರಿನಲ್ಲಿ... (ಕೊಪ್ಪಳ)-೧

ನನ್ನೂರು ಕೊಪ್ಪಳದಲ್ಲಿ ಮಳೆ ಕಡಿಮೆ. ಒಂದು ಬೆಳೆ ಬಂದರೆ ಅದೇ ಪುಣ್ಯ ಎನ್ನುವ ಪರಿಸ್ಥಿತಿ ಈಗಲೂ ಇದೆ. ನೀರಾವರಿ ಇರುವ ಕೆಲ ಪ್ರದೇಶಗಳನ್ನು ಬಿಟ್ಟರೆ, ಉಳಿದ ಕಡೆ ಮುಂಗಾರು ಮುಗಿಯುತ್ತಲೇ ನೆಲ ಭಣಗುಡತೊಡಗುತ್ತದೆ. ಸೂರ್ಯನ ಪ್ರತಾಪ ವಿಜೃಂಭಿಸುತ್ತದೆ. ಅಂಥ ಹಲವಾರು ಚಿತ್ರಣಗಳು ಇಲ್ಲಿವೆ. ಮಳೆ ಕಡಿಮೆ ಇದ್ದರೂ ಜೀವನೋತ್ಸಾಹಕ್ಕೆ ಮಾತ್ರ ಯಾವ ಕೊರತೆಯೂ ಇರುವುದಿಲ್ಲ ಎಂಬುದಕ್ಕೆ ಇವು ಜೀವಂತ ಸಾಕ್ಷಿ ಕೂಡಾ ಹೌದು.

೧. ಬಸವ ನಮಸ್ಕಾರ...

ಹಳ್ಳಿಗಳಲ್ಲಿ ಸ್ವಾಗತ ಕೋರುವ ಎತ್ತಿನ ತಲೆಬುರುಡೆ. ಇದು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ, ಹೊಲವನ್ನು ಕಾಯುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದು...



೨. ಊರು ಹೋಗು ಎನ್ನುತ್ತದೆ, ಹೊಲ ಬಾ ಎನ್ನುತ್ತದೆ...
ಅಜ್ಜಿಯಾದರೂ ಹೊಲಕ್ಕೆ ಹೋಗಲೇಬೇಕು. ಮಳೆ ಸರಿಯಾಗಿ ಬಂದರೂ ಬರೋದೇ ಒಂದು ಬೆಳೆ. ಹೀಗಾಗಿ, ಅದನ್ನು ಉಳಿಸಿಕೊಳ್ಳಲು ಮನೆಯ ಎಲ್ಲರೂ ದುಡಿಯಲೇಬೇಕು...



೩. ಬಾಲೆಯ ಬೆಳಗು




೪. ಮಲೆತು ನಿಂತ ನೀರಿನಲ್ಲಿ...ಬಾಲ್ಯ



೫. ಬಿದಿರವ್ಯೂಹದಲ್ಲಿ ಅಭಿಮನ್ಯು...



1 comment:

  1. ಸಾವಡಿ ಸರ್,

    ಪ್ರಕಾಶ್ ಕಂದಕೋರರಿಗೆ ಬ್ಲಾಗ್ ತೆರೆದುಕೊಟ್ಟಿದ್ದು ಒಳ್ಳೆಯ ಕೆಲಸ. ಅವರಂಥ ಉತ್ಸಾಹಿ, ಕೆಲಸಗಾರರು ಮತ್ತು ಅವರ ಕಲೆ ಎಲ್ಲರಿಗೂ ತಲುಪಲು ಇಂಥ ಒಂದು ಬ್ಲಾಗ್ ಖಂಡಿತ ಅಗತ್ಯವಿದೆ.

    ಅವರು ತುಂಬಾ ಚೆನ್ನಾಗಿ ತಾಂತ್ರಿಕವಾಗಿ, ಕಲಾತ್ಮಕವಾಗಿಯೂ ಫೋಟೊ ತೆಗೆಯುತ್ತಾರೆ. ಅವರ ಎಲ್ಲಾ ಕಲಾತ್ಮಕ ಚಿತ್ರಗಳು ಬ್ಲಾಗಿಗೆ ಬರಲಿ. ಈಗ ಗೆಳೆಯರೊಂದಿಗೆ ರಾಜಸ್ಥಾನಕ್ಕೆ ಹೋಗಿದ್ದಾರೆ. ಬಂದ ನಂತರ ಉತ್ತಮ ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕಲು ಹೇಳಿ..

    ಧನ್ಯವಾದಗಳು ಸರ್.

    ReplyDelete