Tuesday, October 13, 2009

ಮಳೆ ಮುನಿದ ಊರಿನಲ್ಲಿ... (ಕೊಪ್ಪಳ)-೧

ನನ್ನೂರು ಕೊಪ್ಪಳದಲ್ಲಿ ಮಳೆ ಕಡಿಮೆ. ಒಂದು ಬೆಳೆ ಬಂದರೆ ಅದೇ ಪುಣ್ಯ ಎನ್ನುವ ಪರಿಸ್ಥಿತಿ ಈಗಲೂ ಇದೆ. ನೀರಾವರಿ ಇರುವ ಕೆಲ ಪ್ರದೇಶಗಳನ್ನು ಬಿಟ್ಟರೆ, ಉಳಿದ ಕಡೆ ಮುಂಗಾರು ಮುಗಿಯುತ್ತಲೇ ನೆಲ ಭಣಗುಡತೊಡಗುತ್ತದೆ. ಸೂರ್ಯನ ಪ್ರತಾಪ ವಿಜೃಂಭಿಸುತ್ತದೆ. ಅಂಥ ಹಲವಾರು ಚಿತ್ರಣಗಳು ಇಲ್ಲಿವೆ. ಮಳೆ ಕಡಿಮೆ ಇದ್ದರೂ ಜೀವನೋತ್ಸಾಹಕ್ಕೆ ಮಾತ್ರ ಯಾವ ಕೊರತೆಯೂ ಇರುವುದಿಲ್ಲ ಎಂಬುದಕ್ಕೆ ಇವು ಜೀವಂತ ಸಾಕ್ಷಿ ಕೂಡಾ ಹೌದು.

೧. ಬಸವ ನಮಸ್ಕಾರ...

ಹಳ್ಳಿಗಳಲ್ಲಿ ಸ್ವಾಗತ ಕೋರುವ ಎತ್ತಿನ ತಲೆಬುರುಡೆ. ಇದು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ, ಹೊಲವನ್ನು ಕಾಯುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದು...



೨. ಊರು ಹೋಗು ಎನ್ನುತ್ತದೆ, ಹೊಲ ಬಾ ಎನ್ನುತ್ತದೆ...
ಅಜ್ಜಿಯಾದರೂ ಹೊಲಕ್ಕೆ ಹೋಗಲೇಬೇಕು. ಮಳೆ ಸರಿಯಾಗಿ ಬಂದರೂ ಬರೋದೇ ಒಂದು ಬೆಳೆ. ಹೀಗಾಗಿ, ಅದನ್ನು ಉಳಿಸಿಕೊಳ್ಳಲು ಮನೆಯ ಎಲ್ಲರೂ ದುಡಿಯಲೇಬೇಕು...



೩. ಬಾಲೆಯ ಬೆಳಗು




೪. ಮಲೆತು ನಿಂತ ನೀರಿನಲ್ಲಿ...ಬಾಲ್ಯ



೫. ಬಿದಿರವ್ಯೂಹದಲ್ಲಿ ಅಭಿಮನ್ಯು...



Sunday, October 11, 2009

ಕ್ಯಾಮೆರಾ ಕಣ್ಣಿನಿಂದ ಜಗವ ನೋಡುತ್ತ...


ಆತ್ಮೀಯರಿಗೆ ಸ್ವಾಗತ.

ಇದು ನನ್ನ ಮೊದಲ ಬ್ಲಾಗ್‌. ಕೊಪ್ಪಳದಲ್ಲಿ ಹುಟ್ಟಿ ಬೆಳೆದ ನನಗೆ ಬಾಲ್ಯದಿಂದಲೂ ಫೊಟೊಗಳೆಂದರೆ ತುಂಬಾ ಪ್ರೀತಿ. ಬಡತನದಿಂದಾಗಿ ನಾಲ್ಕನೇ ತರಗತಿಗೇ ಓದು ಮೊಟಕಾದಾಗ, ಕೈ ಹಿಡಿದಿದ್ದು ಫೊಟೊ ಪ್ರೀತಿ. ಸ್ಟುಡಿಯೋ ಒಂದರಲ್ಲಿ ಸಹಾಯಕನಾಗಿ ಕೆಲಸ ಪ್ರಾರಂಭಿಸಿದ ನಾನು ಫೊಟೊಗಳೊಂದಿಗೆ ಬೆಳೆದೆ. ಕ್ಯಾಮೆರಾವನ್ನು ಪ್ರೀತಿಸಿದೆ. ಮುಂದೆ ಅದೇ ನನ್ನ ಬದುಕಾಯಿತು.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಲಕ್ಷಾಂತರ ಫೊಟೊಗಳನ್ನು ತೆಗೆದಿದ್ದೇನೆ. ಅವುಗಳ ಪೈಕಿ ಅರ್ಧಕ್ಕರ್ಧ ಫೊಟೊಗಳು ಹವ್ಯಾಸಕ್ಕೆ ಸಂಬಂಧಿಸಿದವು. ಸಾವಿರಾರು ಅತ್ಯುತ್ತಮ ಫೊಟೊಗಳನ್ನು ತೆಗೆದ ತೃಪ್ತಿ ಇದೆ. ಆದರೂ, ಫೊಟೊಗಳನ್ನು ತೆಗೆಯುವ ಹುಚ್ಚು ಕುಗ್ಗಿಲ್ಲ. ಕೊಪ್ಪಳದ ಸುತ್ತಮುತ್ತಲಿನ ಬದುಕೇ ನನ್ನ ಫೊಟೊಗಳಿಗೆ ಸ್ಫೂರ್ತಿ.

ನನ್ನ ಫೊಟೊಗಳಿಗೆ ಹಲವಾರು ಬಾರಿ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿವೆ. ನಾಡಿನ ಖ್ಯಾತ ಪತ್ರಿಕೆಗಳಲ್ಲಿ ನೂರಾರು ಫೊಟೊಗಳು ಅಚ್ಚಾಗಿವೆ. ಕಳೆದ ಹತ್ತು ವರ್ಷಗಳಿಂದ ಪತ್ರಿಕೆಗಳೊಂದಿಗೂ ಸಕ್ರಿಯನಾಗಿ ಗುರುತಿಸಿಕೊಂಡಿರುವ ನಾನು, ಈಗ ಇಂಟರ್‌ನೆಟ್ ಮೂಲಕ ನನ್ನ ಫೊಟೊಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.

ನೀವು ಮೆಚ್ಚಿ ಒಂದು ಸಾಲು ಬರೆದರೆ, ನನ್ನ ಫೊಟೊ ಪ್ರೀತಿಗೆ ನೀರೆರೆದಂತಾಗುತ್ತದೆ.

ಪ್ರೀತಿ ಇರಲಿ.

- ಪ್ರಕಾಶ ಕಂದಕೂರ