Sunday, October 11, 2009

ಕ್ಯಾಮೆರಾ ಕಣ್ಣಿನಿಂದ ಜಗವ ನೋಡುತ್ತ...


ಆತ್ಮೀಯರಿಗೆ ಸ್ವಾಗತ.

ಇದು ನನ್ನ ಮೊದಲ ಬ್ಲಾಗ್‌. ಕೊಪ್ಪಳದಲ್ಲಿ ಹುಟ್ಟಿ ಬೆಳೆದ ನನಗೆ ಬಾಲ್ಯದಿಂದಲೂ ಫೊಟೊಗಳೆಂದರೆ ತುಂಬಾ ಪ್ರೀತಿ. ಬಡತನದಿಂದಾಗಿ ನಾಲ್ಕನೇ ತರಗತಿಗೇ ಓದು ಮೊಟಕಾದಾಗ, ಕೈ ಹಿಡಿದಿದ್ದು ಫೊಟೊ ಪ್ರೀತಿ. ಸ್ಟುಡಿಯೋ ಒಂದರಲ್ಲಿ ಸಹಾಯಕನಾಗಿ ಕೆಲಸ ಪ್ರಾರಂಭಿಸಿದ ನಾನು ಫೊಟೊಗಳೊಂದಿಗೆ ಬೆಳೆದೆ. ಕ್ಯಾಮೆರಾವನ್ನು ಪ್ರೀತಿಸಿದೆ. ಮುಂದೆ ಅದೇ ನನ್ನ ಬದುಕಾಯಿತು.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಲಕ್ಷಾಂತರ ಫೊಟೊಗಳನ್ನು ತೆಗೆದಿದ್ದೇನೆ. ಅವುಗಳ ಪೈಕಿ ಅರ್ಧಕ್ಕರ್ಧ ಫೊಟೊಗಳು ಹವ್ಯಾಸಕ್ಕೆ ಸಂಬಂಧಿಸಿದವು. ಸಾವಿರಾರು ಅತ್ಯುತ್ತಮ ಫೊಟೊಗಳನ್ನು ತೆಗೆದ ತೃಪ್ತಿ ಇದೆ. ಆದರೂ, ಫೊಟೊಗಳನ್ನು ತೆಗೆಯುವ ಹುಚ್ಚು ಕುಗ್ಗಿಲ್ಲ. ಕೊಪ್ಪಳದ ಸುತ್ತಮುತ್ತಲಿನ ಬದುಕೇ ನನ್ನ ಫೊಟೊಗಳಿಗೆ ಸ್ಫೂರ್ತಿ.

ನನ್ನ ಫೊಟೊಗಳಿಗೆ ಹಲವಾರು ಬಾರಿ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿವೆ. ನಾಡಿನ ಖ್ಯಾತ ಪತ್ರಿಕೆಗಳಲ್ಲಿ ನೂರಾರು ಫೊಟೊಗಳು ಅಚ್ಚಾಗಿವೆ. ಕಳೆದ ಹತ್ತು ವರ್ಷಗಳಿಂದ ಪತ್ರಿಕೆಗಳೊಂದಿಗೂ ಸಕ್ರಿಯನಾಗಿ ಗುರುತಿಸಿಕೊಂಡಿರುವ ನಾನು, ಈಗ ಇಂಟರ್‌ನೆಟ್ ಮೂಲಕ ನನ್ನ ಫೊಟೊಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.

ನೀವು ಮೆಚ್ಚಿ ಒಂದು ಸಾಲು ಬರೆದರೆ, ನನ್ನ ಫೊಟೊ ಪ್ರೀತಿಗೆ ನೀರೆರೆದಂತಾಗುತ್ತದೆ.

ಪ್ರೀತಿ ಇರಲಿ.

- ಪ್ರಕಾಶ ಕಂದಕೂರ

4 comments:

  1. ನಿಮ್ಮ ಛಾಯಾಚಿತ್ರಗಳನ್ನು ನೋಡಲು ಆಸಕ್ತಿಯಿಂದ ಕಾಯುತ್ತಿರುವೆ

    ReplyDelete
  2. ಪ್ರಕಾಶ್,

    ನಮ್ಮ ಬ್ಲಾಗ್ ಬಳಗಕ್ಕೆ ನಿಮಗೆ ಸ್ವಾಗತ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಆದ್ರೂ ಈಗಲಾದರೂ ಬ್ಲಾಗ್ ತೆರೆದಿರಲ್ಲ. ಅದೇ ಸಂತೋಷ. ನಮ್ಮ ಛಾಯಾಗ್ರಾಹಕರ ಅದರಲ್ಲೂ ಕಲಾತ್ಮಕ ಛಾಯಾಗ್ರಾಹಕರ ಸಂಖ್ಯೆ ಹೆಚ್ಚಬೇಕೆನ್ನುವುದು ನನ್ನ ಆಸೆ.

    ಇನ್ನು ಮುಂದೆ ಎಲ್ಲಾ ಬ್ಲಾಗ್ ಗೆಳೆಯರಿಗೂ ನಿಮ್ಮ ಉತ್ತಮ ಚಿತ್ರಗಳನ್ನು ನೋಡುವ ಅವಕಾಶ.
    all the best.

    ReplyDelete